Pages

Friday, December 12, 2014

ಕನ್ನಡ ಸಾಹಿತ್ಯ ಸಮ್ಮೇಳನಗಳು & ಅಧ್ಯಕ್ಷರು :
ಕ್ರಮ ಸಂಖ್ಯೆ  ವರ್ಷ ಸ್ಥಳ ಅಧ್ಯಕ್ಷತೆ 
೧ ೧೯೧೫ ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬ ಬೆಂಗಳೂರು ಎಚ್.ವಿ. 
೩ ೧೯೧೭ ಮೈಸೂರು ಎಚ್.ವಿ.ನಂಜುಂಡಯ್ಯ
೪ ೧೯೧೮ ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧ ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨ ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ ೧೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬ ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭ ಮಂಗಳೂರು ಆರ್.ತಾತಾಚಾರ್ಯ
೧೪ ೧೯೨೮ ಕಲಬುರ್ಗಿ ಬಿ ಎಂ ಶ್ರೀ
೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨ ಮಡಿಕೇರಿ ಡಿ ವಿ ಜಿ
೧೯ ೧೯೩೩ ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫ ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭ ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ
೨೩ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯ ಬೆಳಗಾವಿ ಮುದವೀಡು ಕೃಷ್ಣರಾಯರು
೨೫ ೧೯೪೦ ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ ೧೯೪೧ ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩ ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪ ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫ ಮದರಾಸು ಟಿ ಪಿ ಕೈಲಾಸಂ
೩೦ ೧೯೪೭ ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮ ಕಾಸರಗೋಡು ತಿ.ತಾ.ಶರ್ಮ
೩೨ ೧೯೪೯ ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦ ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧ ಮುಂಬಯಿ ಗೋವಿಂದ ಪೈ
೩೫ ೧೯೫೨ ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪ ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೧೯೫೬ ರಾಯಚೂರು ಶ್ರೀರಂಗ
೩೯ ೧೯೫೭ ಧಾರವಾಡ ಕುವೆಂಪು
೪೦ ೧೯೫೮ ಬಳ್ಳಾರಿ ವಿ.ಕೆ.ಗೋಕಾಕ
೪೧ ೧೯೫೯ ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦ ಮಣಿಪಾಲ ಅ.ನ. ಕೃಷ್ಣರಾಯ
೪೩ ೧೯೬೧ ಗದಗ ಕೆ.ಜಿ.ಕುಂದಣಗಾರ
೪೪ ೧೯೬೩ ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫ ಕಾರವಾರ ಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭ ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
೪೭ ೧೯೭೦ ಬೆಂಗಳೂರು ದೇ.ಜವರೆಗೌಡ
೪೮ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬ ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮ ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧ ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧ ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨ ಶಿರಸಿ ಗೊರೂರು ರಾಮಸ್ವಾಮಿ ಐಯಂಗಾರ್
೫೬ ೧೯೮೪ ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫ ಬೀದರ್ ಹಾ.ಮಾ.ನಾಯಕ
೫೮ ೧೯೮೭ ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦ ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧ ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨ ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩ ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪ ಮಂಡ್ಯ ಚದುರಂಗ
೬೫ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯ ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨ ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭ ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦ ಗದಗ ಡಾ. ಗೀತಾ ನಾಗಭೂಷಣ
೭೭ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨ ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩ ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪ ಕೊಡಗು ನಾ ಡಿಸೋಜ
೮೧ ೨೦೧೫ ಶ್ರವಣಬೆಳಗೊಳ  (ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ವಿಜೇತರಾದ ಮೈಸೂರಿನ ದೇವನೂರು ಮಹಾದೇವರನ್ನು ಸಮ್ಮೇಳನದ ಅಧ್ಯಕ್ಷರಾಗುವಂತೆ ಕ.ಸಾ.ಪ ಅಧಿಕೃತವಾಗಿ ಕೋರಿದೆ)


--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

ಹತ್ತು ರಸಪ್ರಶ್ನೆಗಳು (೯/೧೨/೨೦೧೪)
ನಲ್ಲಿ ಕೇಳಿದ್ದು)

> 1. 'ಗಾಂಧಿ' ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು?
>
> 1. ರಿಚರ್ಡ್ ಅಂಟಿನ್ ಬರೊ.
> 2. ರೋಹನ್ ಸೇಠ್.
> 3. ಬೆನ್ ಕಿಂಗ್ಸಲಿ.●●
> 4. ಭಾನು ಅಥಯ್ಯಾ.
>
> 2. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?
>
> 1. ಕನುಪ್ರಿಯಾ ಅಗರವಾಲ್.●●
> 2. ಕಮಲಾ ರತ್ತಿನಂ.
> 3. ಲೂಯಿಸ್ ಬ್ರೌನ್.
> 4. ಮೇಲಿನ ಯಾವುದು ಅಲ್ಲ.
>
> 3. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?
>
> 1. 04.
> 2. 06.●●
> 3. 08.
> 4. 10.
>
> 4. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?
>
> 1. ವಿಜಯಂತಾ.
> 2. ಪೃಥ್ವಿ.●●
> 3. ತೇಜಸ್.
> 4. ಅನಾಮಿಕ.
>
> 5. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
>
> 1. ಮೂಡಬಿದ್ರೆ. ●●
> 2. ವಿಠ್ಠಲಪುರ.
> 3. ಶ್ರವಣಬೆಳಗೋಳ.
> 4. ಚಂದ್ರಾಪೂರ.
>
> 6. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ 'ಟ್ರಾನ್ಸ ಸೈಬೆರಿಯನ್ ' ಯಾವ ದೇಶದಲ್ಲಿದೆ?
>
> 1. ರಷ್ಯಾ.●●
> 2. ಜಪಾನ.
> 3. ಜರ್ಮನಿ.
> 4. ಚೀನಾ.
>
> 7. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
>
> 1. ನಾಗೇಂದ್ರ ಸಿಂಗ್.
> 2. ಬೆನೆಗಲ್ ರಾಮರಾವ.
> 3. R.S. ಪಂಂಡಿತ.
> 4. ಡಾ. ರಾಧಾಸಿಂಗ್.●●
>
> 8. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?
>
> 1. ಶಶಿ ಥರೂರ್.
> 2. ವಿಜಯಲಕ್ಷ್ಮೀ ಪಂಡಿತ.
> 3. ರಾಧಾಕೃಷ್ಣನ್.●●
> 4. ಮೇಲಿನ ಯಾರು ಅಲ್ಲ.
>
> 9. 'ವಿಶ್ವಸಂಸ್ಥೆ' ಎಂಬ ಪದವನ್ನು ನೀಡಿದವರು ಯಾರು?
>
> 1. ಜಾನ್ ಡಿ ರಾಕಫೆಲ್ಲರ್.
> 2. ಡಿ.ರೂಸವೆಲ್ಟ್.●●
> 3. ವಿನ್ಸಟನ್ ಚರ್ಚಿಲ್.
> 4. ವುಡ್ರೋ ವಿಲ್ಸನ್.
>
> 10. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?
>
> 1. 192.
> 2. 193.●●
> 3. 194.
> 4. ಯಾವುದು ಅಲ್ಲ.
> <><>==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
>
> :-ಸಂಪಾದನೆ :ತೀರ್ಥಪ್ಪ ಶ್ರೀಚೆಂದ


--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪತ್ರಾಂಕಿತ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ

                    ಪೂರ್ವಭಾವಿ ಪರೀಕ್ಷೆಯ ಒಂದು ಐಚ್ಛಿಕ ವಿಷಯ ಮತ್ತು ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಾಗಿ ಬಹು ಆಯ್ಕೆ ಮಾದರಿ ವಸ್ತುನಿಷ್ಠ ಪ್ರಶ್ನೆಗಳ ಎರಡು ಕಡ್ಡಾಯ ಪತ್ರಿಕೆಗಳು ಇರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ಪರೀಕ್ಷಾ ಅವಧಿ 2 ಗಂಟೆಗಳು.

ಪತ್ರಿಕೆ - 1 ರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು) ಹಾಗೂ ಮಾನವಿಕ ವಿಷಯಗಳನ್ನು ಕುರಿತಂತೆ 60 ಪ್ರಶ್ನೆಗಳು (120 ಅಂಕಗಳು) ಇರುತ್ತವೆ.

ಪತ್ರಿಕೆ - 2 ರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು), ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಹಾಗೂ ಸಾಮಾನ್ಯ ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಇರುತ್ತವೆ.

ಪಠ್ಯಕ್ರಮ ಹೀಗಿದೆ:

ಪತ್ರಿಕೆ 1: ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು.

* ಮಾನವಿಕ ವಿಷಯಗಳು - ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ - ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಜೊತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತ ಮತ್ತು ಪ್ರಪಂಚದ ಭೂಗೋಳಶಾಸ್ತ್ರ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತದ ರಾಜಕೀಯ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ - ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಗ್ರಾಮೀಣ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ

ಪತ್ರಿಕೆ 2 : ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ರಾಜ್ಯದ ಪ್ರಸ್ತುತ ವಿದ್ಯಮಾನ ಮತ್ತು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು

* ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿನ ಸಮಕಾಲೀನ ಬೆಳವಣಿಗೆಗಳು, ಆರೋಗ್ಯ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.

ಸಾಮಾನ್ಯ ಸುಶಿಕ್ಷಿತ ಪದವೀಧರ ಅಭ್ಯರ್ಥಿಯ ಸಾಮಾನ್ಯ ನಿರೀಕ್ಷಣೆಯ ಮಟ್ಟದಲ್ಲಿ ಕೇಳಲಾಗುವ ಈ ಪ್ರಶ್ನೆಗಳಿಗೆ ವಿಜ್ಞಾನ ವಿಷಯದ ಆಳವಾದ ಅಧ್ಯಯನ ಮಾಡಿರಲೇಬೇಕಾದ ಅಗತ್ಯವೇನಿಲ್ಲ.

* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಗ್ರಹಣ ಸಾಮರ್ಥ್ಯ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯಾ ನಿರ್ವಹಣಾ ಸಾಮರ್ಥ್ಯ, ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ನಕ್ಷೆಗಳು, ರೇಖಾ ಚಿತ್ರಗಳು, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆಗೆ ತಕ್ಕಂತೆ.)

Thursday, December 4, 2014

Re: [ms-stf '18332'] ಇವುಗಳನ್ನು ಬಿಡಿಸುವ ಬಗೆ ಹೇಗೆ..?

2). B
3). A
5). C
6). B
7). B
8). B
9). A
10). D
11). B

On Nov 27, 2014 7:50 PM, Ravi Aheri <raviaheri@gmail.com> wrote:


1.26, 52, 91, 117, 141, 195, 234 ಈ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
ಎ. 91
ಬಿ. 195
ಸಿ. 117
ಡಿ. 141
ಉತ್ತರ:

2. ಒಂದು ತ್ರಿಕೋನವು 14cms ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ. ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm
ಸಿ. 33cm
ಡಿ. 22/7cm
ಉತ್ತರ:

3.ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು ?
ಎ. ರೂ. 14641
ಬಿ. ರೂ. 18641
ಸಿ. ರೂ. 17641
ಡಿ. ರೂ. 15000
ಉತ್ತರ:

4.ಈ ಕೆಳಗಿನ ನಾಲ್ಕು ಚೌಕಗಳ ಘಟಕಗಳಲ್ಲಿ ಒಂದು ನಿಯಮಾನುಸಾರವಾಗಿ ಅಂಕಿಗಳನ್ನು ತುಂಬಲಾಗಿದೆ (?) ಚಿಹ್ನೆ ಇರುವ ಚೌಕದಲ್ಲಿ ಯಾವ ಸಂಖ್ಯೆಯನ್ನು ತುಂಬಬೇಕು ?
1 6 4 8 7 11 10 15
4 5 6 7 8 10 10 ?
ಎ. 13
ಬಿ. 14
ಸಿ. 16
ಡಿ. 17
ಉತ್ತರ:

5.ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ. ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ. ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ ಒಟ್ಟು ಗುಂಪುಗಳ ಸಂಖ್ಯೆ ಎಷ್ಟು ?
ಎ. 26
ಬಿ. 29
ಸಿ. 36
ಡಿ. 58
ಉತ್ತರ:

6. ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯಾರ್ಥಿಯೂ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಎರಡನ್ನೂ ತೆಗೆದುಕೊಂಡಿದ್ದರು ಭೌತಶಾಸ್ತ್ರವನ್ನು ತೆಗೆದುಕೊಂಡಿದ್ದವರು 65.28% ಇದ್ದರು, ಗಣಿತಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು ಒಟ್ಟು ಅಭ್ಯಾರ್ಥಿಗಳ ಸಂಖ್ಯೆ 2000. ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯಾರ್ಥಿಗಳ ಸಂಖ್ಯೆ ಎಷ್ಟು ?
ಎ. 750
ಬಿ. 500
ಸಿ. 250
ಡಿ. 125
ಉತ್ತರ:

7.ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ. ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರೆವೃತ್ತಾಕಾರದ ಭೂ ಭಾಗವನ್ನು ಸೇರಿಸಲಾಗಿದೆ. ಪ್ರತಿಗಂಟೆಗೆ 4.32 ಕಿಮೀ ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ ಈ ಪ್ರದೇಶದ ಸುತ್ತಲೂ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ ?
ಎ. 4 ನಿಮಿಷ
ಬಿ. 6 ನಿಮಿಷ
ಸಿ. 8 ನಿಮಿಷ
ಡಿ. 8 ನಿಮಿಷ 10 ಸೆಕೆಂಡ್
ಉತ್ತರ:

8.AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ. P ಎಂಬ ಬಿಂದುವು ಈ ರೇಖೆಯ ಮೇಲೆ A ಮತ್ತು B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ. AB ಗೆ ಸಮಾನಾಂತರವಾಗಿರುವ ರೇಖೆ
ಬಿ. AB ಯ ಲಂಭಾತ್ಮಕ ಸಮಭಾಜಕವಾಗಿರುವಂತಹ ರೇಖೆ
ಸಿ. A ಮತ್ತು B ಯ ಮೂಲಕ ಹಾದು ಹೋಗಿವಂಥ ವೃತ್ತ
ಡಿ. A ಮತ್ತು B ಮೂಲಕ ಹಾದು ಹೋಗುವಂತ ಎರಡು ವಕ್ರಗಳು
ಉತ್ತರ:

9.A ಎಂಬ ತೊಟ್ಟಿಯಲ್ಲಿ 1/2 ರಷ್ಟು ನೀರಿದೆ. A ತೋಟ್ಟಿಯ ಎರಡರಷ್ಟು ಸಾಮರ್ಥ್ಯವಿರುವ B ತೊಟ್ಟಿಯಲ್ಲಿ 1/5 ರಷ್ಟು ನೀರಿದೆ. A ತೊಟ್ಟಿಯಲ್ಲಿರುವ ನೀರನ್ನೆಲ್ಲಾ B ತೊಟ್ಟಿಗೆ ತುಂಬಿಸಿದರೆ, B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ ?
ಎ. 9/20
ಬಿ. 3/10
ಸಿ. 7/10
ಡಿ. 7/20
ಉತ್ತರ:

10. ಒಂದು ಡಬ್ಬಿಯಲ್ಲಿ 1 ರೂ. ನಾಣ್ಯಗಳು, 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ. ಒಟ್ಟು ಮೊಬಲಗು 341 ರೂ. ಆದರೆ ಈ ಡಬ್ಬಿಯಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ ಎಷ್ಟು ?
ಎ. 417
ಬಿ. 437
ಸಿ. 517
ಡಿ. 527
ಉತ್ತರ:

11. ಒಬ್ಬ ವ್ಯಕ್ತಿಯು 6 ಲಕ್ಷ ರೂ.ಗಳಿಗೆ ಜಾಗವನ್ನು ಖರೀದಿಸಿದ. ವೆಚ್ಚದ 30% ರಷ್ಟನ್ನು ಆತ ಜಾಗದ ಅಭಿವೃದ್ಧಿಗಾಗಿ ಖರ್ಚು ಮಾಡಿ ಅದನ್ನು 25 ಪ್ಲಾಟ್ ಗಳಾಗಿ ವಿಭಜಿಸಿದ. ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ ಪ್ರತಿಯೊಂದು ಪ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು ?
ಎ. 35,000 ರೂ.
ಬಿ. 39,000 ರೂ.
ಸಿ. 43,000 ರೂ.
ಡಿ. 45,000 ರೂ.
ಉತ್ತರ:

RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.
Visit this group at http://groups.google.com/group/mathssciencestf.
To view this discussion on the web visit https://groups.google.com/d/msgid/mathssciencestf/CAOK4tVTZT6dUgLbcpCF88XD7JTm3i1KskGrFV3_Hp%3D63Sy-FZg%40mail.gmail.com.
For more options, visit https://groups.google.com/d/optout.